ಆನೇಕಲ್ನಲ್ಲೂ ಕಳೆಗಟ್ಟಿದ ದಸರಾ ಸಂಭ್ರಮ - ದಸರಾ ಸಡಗರ
ಆನೇಕಲ್: ನಾಡಿನಾದ್ಯಂತ ಮೈಸೂರು ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಆನೇಕಲ್ನಲ್ಲಿಯೂ ದಸರಾ ಸಡಗರ ಕಳೆಗಟ್ಟಿದೆ. ಈ ಕಾರ್ಯಕ್ರಮಕ್ಕೆ ಇಂದು ಶಾಸಕ ಬಿ. ಶಿವಣ್ಣ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು. ನಗರದಲ್ಲಿರುವ ಚೌಡೇಶ್ವರಿ ದೇವಾಲಯ ಸೇವಾ ಸಮಿತಿಯು ಕಳೆದ 19 ವರ್ಷಗಳಿಂದ ದಸರಾ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅಲಂಕಾರ, ವಿಜಯದಶಮಿ ಉತ್ಸವ ತಾಲೂಕಿನಲ್ಲಿ ಜರುಗುತ್ತದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಈಟಿವಿ ಭಾರತನೊಂದಿಗೆ ಮಾತನಾಡಿದ ಶಾಸಕ ಶಿವಣ್ಣ ಅವರು, ದೇವಿ ಎಲ್ಲರಿಗೂ ಸುಖ-ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.