ಭದ್ರಾವತಿ ಕ್ಷೇತ್ರದಲ್ಲಿ ಮನೆ ಮನೆಗೆ ತರಕಾರಿ ಹಂಚಿದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ - ಭದ್ರಾವತಿ ಕ್ಷೇತ್ರದ ಜನತೆಗೆ ಉಚಿತವಾಗಿ ತರಕಾರಿ ಹಂಚಿದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್
ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರು ಎರಡನೇ ಹಂತದ ಲಾಕ್ ಡೌನ್ ವಿಸ್ತರಣೆಯಾದ ಹಿನ್ನೆಲೆ ಕ್ಷೇತ್ರದ ಜನತೆಗೆ ಅನುಕೂಲವಾಗಲೆಂದು ಪ್ರತಿ ಮನೆ ಮನೆಗೆ ತೆರಳಿ ತರಕಾರಿಯನ್ನು ಹಂಚಿದರು. ಭದ್ರಾವತಿಯ ಎಪಿಎಂಸಿ ಮಾರುಕಟ್ಟೆಯ ಗೋಡೌನ್ನಲ್ಲಿ ತರಕಾರಿಗಳನ್ನು ಪ್ಯಾಕ್ ಮಾಡಿ ವಾಹನಗಳಲ್ಲಿ ಜನರ ಮನೆ ಬಾಗಿಲಿಗೆ ಕಳುಹಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 50 ಲಕ್ಷ ರೂ. ಖರ್ಚು ಮಾಡುತ್ತಿರುವುದಾಗಿ ಶಾಸಕ ಬಿ.ಕೆ. ಸಂಗಮೇಶ್ ತಿಳಿಸಿದ್ದಾರೆ.