'ದೇಶದಲ್ಲಿ ಮತೀಯವಾದಿಗಳು ತಾತ್ಕಾಲಿಕವಾಗಿ ಅಧಿಕಾರ ನಡೆಸಲು ಮಾತ್ರ ಸಾಧ್ಯ' - Congress Founding Day celebration
ಮಂಗಳೂರು: ದೇಶದಲ್ಲಿ ಮತೀಯವಾದಿ ಶಕ್ತಿಗಳು ತಾತ್ಕಾಲಿಕವಾಗಿ ಅಧಿಕಾರ ನಡೆಸಲು ಮಾತ್ರ ಸಾಧ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಜರಾಮರವಾಗಿ ಉಳಿಯವಂತಹ ಪಕ್ಷ. ದೇಶದ ವರ್ತಮಾನ ಪರಿಸ್ಥಿತಿಯಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಲು ಕಾಂಗ್ರೆಸ್ ಅನಿವಾರ್ಯ. ಮತೀಯವಾದಿ ಶಕ್ತಿಗಳು ಕೇವಲ ತಾತ್ಕಾಲಿಕವಾಗಿ ದೇಶದಲ್ಲಿ ಅಧಿಕಾರ ಮಾಡಲು ಸಾಧ್ಯವಿದೆ ಎಂದರು.