ಸಿದ್ದಾರ್ಥ್ ಹೆಗ್ಡೆ ಕಾಫೀ ಡೇ ಗ್ಲೋಬಲ್ ಲಿ. ಕಂಪನಿಯಲ್ಲಿ ಹೆಡೆ ಎತ್ತಿ ನಿಂತ ನಾಗಪ್ಪ! - ಸಿದ್ದಾರ್ಥ್ ಹೆಗ್ಡೆ ಕಾಫೀ ಡೇ ಗ್ಲೋಬಲ್ ಲಿ. ಕಂಪನಿಯಲ್ಲಿ ನಾಗರಹಾವು ಪತ್ತೆ
ಮೂಡಿಗೆರೆ ರಸ್ತೆಯಲ್ಲಿರುವ ಕಾಫೀ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಕಾಫೀ ಡೇ ಗ್ಲೋಬಲ್ ಲಿ. ಕಂಪನಿಯ ಕಾಫೀ ಬೀಜಗಳ ಗೋಡೌನ್ನಲ್ಲಿ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಮಿಕರು ಉರಗ ತಜ್ಞ ಸ್ನೇಕ್ ನರೇಶ್ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಸ್ನೇಕ್ ನರೇಶ್ ಅವರು ಕಾಫೀ ಬೀಜಗಳ ಚೀಲದ ಮಧ್ಯೆ ಮಲಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಅದನ್ನು ನಗರದ ಹೊರ ವಲಯದ ಆಲದಗುಡ್ಡೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.