ಬಿಬಿಎಂಪಿ ಕಾರ್ಯಗಳಿಗೆ ಸಿಎಂ ಚಾಲನೆ: 2ನೇ ಶನಿವಾರವೂ ವಿಧಾನಸೌಧ ಗಿಜಿಗಿಜಿ - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನ್ಯೂಸ್
ಸಾಮಾನ್ಯವಾಗಿ ಸರ್ಕಾರಿ ರಜಾ ದಿನಗಳಲ್ಲಿ ವಿಧಾನಸೌಧದಲ್ಲಿ ಅಧಿಕಾರಿಗಳು, ಸಚಿವರು ಯಾರೂ ಸುಳಿಯದ ಹಿನ್ನೆಲೆ ಚಟುವಟಿಕೆ ರಹಿತವಾಗಿ ಕಂಡುಬರುತ್ತದೆ. ಆದರೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಪೂರ್ವಭಾಗದಲ್ಲಿ ಬಿಬಿಎಂಪಿಯ ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿದ ಹಿನ್ನೆಲೆ ಶಕ್ತಿಸೌಧ ಸಂಪೂರ್ಣವಾಗಿ ಗಿಜಿಗುಡುತ್ತಿತ್ತು.