ಮಕ್ಕಳ ದಿನಾಚರಣೆಯಂದು ಹುಟ್ಟಿದ ಶಿಶುಗಳಿಗೆ ನೆಹರೂ ಎಂದು ನಾಮಕಾರಣ... ಎಲ್ಲಿ ಅಂತೀರಾ!? - ಮಕ್ಕಳ ದಿನಾಚರಣೆ ಕಾರ್ಯಕ್ರಮ
ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಜನ್ಮದಿನದ ಪ್ರಯುಕ್ತ ಬ್ರಹ್ಮಕುಮಾರಿ ಸಂಸ್ಥೆ ನೇತೃತ್ವದಲ್ಲಿ ಸಮಾಜ ಸೇವಕ ಎಲ್.ಸುರೇಶ್ ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ ಎರಡು ಗಂಡು ಶಿಶುಗಳಿಗೆ ಪಾಲಕರನ್ನು ಒಪ್ಪಿಸಿ ನೆಹರೂ ಎಂದು ನಾಮಕರಣ ಮಾಡಲಾಯಿತು. ಎಲ್ಲಾ ಮಕ್ಕಳು ನೆಹರೂ ಅವರಂತೆ ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು ಎಂದು ಬ್ರಹ್ಮಕುಮಾರಿ ಸಂಸ್ಥೆಯ ಸಂಯೋಜಕಿ ದಾನೇಶ್ವರಿ ಹಾರೈಸಿದರು.