ತರಕಾರಿ ಅಂಗಡಿಗೆ ನುಗ್ಗಿದ ಕಾರು : ತಪ್ಪಿದ ಭಾರೀ ಅನಾಹುತ - ತರಕಾರಿ ಅಂಗಡಿಗೆ ನುಗ್ಗಿದ ಕಾರು
ಉಜಿರೆ ನಗರದ ಕಾಲೇಜ್ ರಸ್ತೆಯಲ್ಲಿರುವ ತರಕಾರಿ ಅಂಗಡಿಯೊಂದರ ಎದುರು ವ್ಯಕ್ತಿಯೊಬ್ಬರು ಕಾರೊಂದನ್ನು ನಿಲ್ಲಿಸಿ ಹೊರ ಹೋಗಿದ್ದರು. ಈ ಸಂದರ್ಭದಲ್ಲಿ ಕಾರು ಏಕಾಏಕಿ ತಗ್ಗು ಪ್ರದೇಶದಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ. ಕಾರು ಬರುವುದನ್ನು ಗಮನಿಸಿ ಅಂಗಡಿಯಲ್ಲಿದ್ದವರು ತಕ್ಷಣ ತಪ್ಪಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ..