ಶಿವಮೊಗ್ಗದಲ್ಲಿ ಹೊತ್ತಿ ಉರಿದ ಕಾರು... ನಡುರಸ್ತೆಯಲ್ಲೇ ಧಗ ಧಗ - ಹೊತ್ತಿ ಉರಿದ ಫೋರ್ಡ್ ಕಾರು
ಚಲಿಸುತ್ತಿದ್ದ ಕಾರು ದಿಢೀರ್ನೇ ಹೊತ್ತಿ ಉರಿದ ಘಟನೆ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಸಾಗರ ಮೂಲದ ಸುನೀಲ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ತಕ್ಷಣವೇ ಅವರು ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.