ಮಸ್ಕಿ ಉಪ ಕದನಕ್ಕೆ ಬಿಎಸ್ವೈ ಪುತ್ರ ಪ್ರವೇಶ.. ಸಂಭಾವ್ಯ ಅಭ್ಯರ್ಥಿ ಪ್ರತಾಪ್‌ಗೌಡ ಪರ ಪ್ರಚಾರ - ಮಸ್ಕಿ ಉಪ ಚುನಾವಣೆ ಪ್ರಚಾರ
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರಚಾರದ ಅಖಾಡಕ್ಕೆ ಧುಮ್ಮುಕಿದ್ದಾರೆ. ತುರುವಿಹಾಳ ಗ್ರಾಮದ ಶ್ರೀ ಬಸವೇಶ್ವರ ಮೂರ್ತಿಗೆ ಸೇಬಿನ ಹಾರ ಹಾಕಲಾಯಿತು. ನಂತರ ಅಭಿಮಾನಿಗಳು ವಿಜಯೇಂದ್ರ ಅವರಿಗೆ ಸೇಬಿನ ಹಾರ ಹಾಕಿ ಜೈಕಾರ ಹಾಕಿದ್ರು. ಅಲ್ಲದೇ ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾಗದಿದ್ದರು ಸಂಭಾವ್ಯ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಪ್ರಚಾರ ನಡೆಸಿದ್ರು.