ಕೋವಿಡ್ ಸಮಯದಲ್ಲಷ್ಟೇ ಅಲ್ಲ, ಎಲ್ಲಾ ಸಮಯದಲ್ಲೂ ನಾವು ಜಾಗರೂಕರಾಗಿರಬೇಕು: ನಟ ವಿಜಯ್ ರಾಘವೇಂದ್ರ - ರಕ್ತದಾನ ಶಿಬಿರದಲ್ಲ ನಟ ವಿಜಯ ರಾಘವೇಂದ್ರ ಭಾಗಿ
ಕೊರೊನಾ ಸಂದರ್ಭದಲ್ಲಿ ಅದೆಷ್ಟೋ ಆಸ್ಪತ್ರೆಗಳಲ್ಲಿ ರಕ್ತದ ಆಭಾವ ಉಂಟಾಗಿತ್ತು. ಈಗಲೂ ಇನ್ನೂ ಕೆಲವು ರಕ್ತ ಕೇಂದ್ರಗಳಲ್ಲಿ ರಕ್ತದ ಕೊರತೆ ಇದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಶೇಶಾದ್ರಿಪುರಂ ಕಾಲೇಜಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅತಿಥಿಯಾಗಿ ಆಗಮಿಸಿದ್ದರು. 'ರಕ್ತ ಕೇವಲ ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲ, ಯಾರ ಸಮಯ ಹೇಗಿರುತ್ತೆ ಅಂತ ಹೇಳೋದು ಕಷ್ಟ. ಹೀಗಾಗಿ ನಾವು ಜಾಗರೂಕರಾಗಿ ಇರಬೇಕು. ಹುಷಾರಾಗಿರಬೇಕು ಎಂದು ನಟ ವಿಜಯ್ ರಾಘವೇಂದ್ರ ಹೇಳಿದರು. ಇನ್ನು ಈ ಶಿಬಿರದಲ್ಲಿ ವಿಧ್ಯಾರ್ಥಿಗಳು, ಶಿಕ್ಷಕರು ಸೇರಿ ಸುಮಾರು 700ಕ್ಕೂ ಹೆಚ್ಚು ಯುನಿಟ್ ರಕ್ತದಾನ ಮಾಡಿದರು.