ಟಿಎಸ್ ನಂಬರ್ಗಾಗಿ ಬಳ್ಳಾರಿ ಜನರ ಪರದಾಟ: ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇಲ್ವಂತೆ! - ಬಳ್ಳಾರಿ ಟಿಎಸ್ ಸಂಖ್ಯೆ ಸಮಸ್ಯೆ ಸುದ್ದಿ
ಬಳ್ಳಾರಿ ನಗರದಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಜನರು ಟಿಎಸ್(ಟೌನ್ ಸರ್ವೆ ಸೈಟ್) ನಂಬರ್ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾರಿಗೂ ನಮೂನೆ- 2 ಅರ್ಜಿಯನ್ನು ಮಹಾನಗರ ಪಾಲಿಕೆ ನೀಡಿಲ್ಲ ಎಂದು ವಿವಿಧ ಸಂಘಟನೆ ಅಧ್ಯಕ್ಷರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಸಮಸ್ಯೆ ಪರಿಹರಿಸಲು ಮನವಿ ಮಾಡಿದರು ಮೌನ ವಹಿಸಿದ್ದಾರೆ. ಅಲ್ಲದೆ, ಪಾಲಿಕೆ ಆಯುಕ್ತರಿಗೆ, ಅಧಿಕಾರಿಗಳಿಗೆ ಈ ಕುರಿತು ಸರಿಯಾದ ಮಾಹಿತಿ ಇಲ್ಲದೇ ಇರುವುದು ದುರಂತವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.