ಬಂಜಾರರ ದೀಪಾವಳಿ ಸಂಭ್ರಮಕ್ಕೆ ಕಾಡು ಹೂವೇ ಶ್ರೇಷ್ಠ... ಅಡವಿಯಿಂದ ಹೂ ತರುತ್ತಾರೆ ಬೆಡಗಿಯರು - ಬಂಜಾರ ಸಮುದಾಯದ ದೀಪಾವಳಿ ವಿಶೇಷ
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಾರಕನಾಳು ದೊಡ್ಡ ತಾಂಡ, ಮಾಡಲಗೇರಿ, ಐಗಳ ಬಸಾಪುರ, ಸೇವಾನಗರ, ಬೇವಿನಹಳ್ಳಿ, ಮಾಚಿಹಳ್ಳಿ, ಉದ್ದಗಟ್ಟಿ, ಲಕ್ಷ್ಮೀಪುರ, ಕುಂಚೂರು ಕೆರೆ, ಖಂಡಿಗೇರಿ, ಬೆಂಡಿಗೇರಿ ಸೇರಿದಂತೆ ಇನ್ನಿತರೆ ತಾಂಡಗಳಲ್ಲಿ ದೀಪಾವಳಿ ಪಾಡ್ಯಮಿ ನಿಮಿತ್ತ ಯುವತಿಯರು ಕಾಡಿಗೆ ತೆರಳಿ ಹೂ ತಂದು ವಿಶಿಷ್ಠವಾಗಿ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.