ಇಂಧನ ಮಿತ ಬಳಕೆಗಾಗಿ ಹಾಡಿನ ಮೂಲಕ ವಿಭಿನ್ನ ಜಾಗೃತಿ: ಸಾರಿಗೆ ಸಿಬ್ಬಂದಿಯ ವಿಡಿಯೋ ವೈರಲ್ - ಇಂಧನ ಮಿತ ಬಳಕೆ ಕುರಿತು ಹಾಡಿನ ಮೂಲಕ ಜಾಗೃತಿ ಮೂಡಿಸಿದ ರಸ್ತೆ ಸಾರಿಗೆ ಸಿಬ್ಬಂದಿ
ಹುಬ್ಬಳ್ಳಿ: ವಾಹನ ಚಾಲಕರು ಇಂಧನವನ್ನು ಮಿತವಾಗಿ ಬಳಕೆ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸ್ವರಚಿತ ಕವನವೊಂದನ್ನು ಹಾಡುವ ಮೂಲಕ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷ್ಮೇಶ್ವರದ ದಸ್ತಗಿರಿ ಎಚ್. ಸೊರಟೂರ ಎನ್ನುವವರು ಈ ಹಾಡು ಹಾಡಿದ್ದಾರೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಆದಾಯದ ಬಹುಪಾಲನ್ನು ಇಂಧನಕ್ಕಾಗಿಯೇ ವಿನಿಯೋಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲಕರು ಇಂಧನವನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಾಡು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದ್ದು, ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.