ಜೈಕಾರ, ಧಿಕ್ಕಾರ, ಹೂವಿನಹಾರ ಎಲ್ಲ ಕ್ರೀಡಾ ಮನೋಭಾವದಿಂದಲೇ ತೆಗೆದುಕೊಳ್ತೀನಿ.. ಡಿಕೆಶಿ - ಡಿಕೆಶಿ ಮೇಲೆ ರಮೇಶ್ ಜಾರಕಿಹೊಳಿ ಬೆಂಬಲಿಗರ ಹಲ್ಲೆ
ಬೆಳಗಾವಿ: ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಹೂವಿನ ಹಾರ, ಕಲ್ಲು ಎಸೆತ ಇವೆಲ್ಲವೂ ಸಾಮಾನ್ಯ. ನಾನು ಬರುವಾಗ ಏನಾಯಿತು? ಹೇಗಾಯಿತು ಎಂದು ನನಗೆ ಗೊತ್ತಿಲ್ಲ. ನಾನು ಎಲ್ಲವನ್ನೂ ಕ್ರೀಡಾಮನೋಭಾವದಿಂದ ತೆಗೆದುಕೊಳ್ಳುತ್ತೇನೆ. ಎಲ್ಲ ಘಟನೆಗಳನ್ನು ಬೆಳಗಾವಿ ಜನರು ನೋಡುತ್ತಿದ್ದಾರೆ. ನಾವು ಚುನಾವಣೆ ಮಾಡಲು ಇಲ್ಲಿಗೆ ಬಂದಿದ್ದೇವೆ. ಶಾಂತ ರೀತಿಯಿಂದ ಚುನಾವಣೆ ಮಾಡಿ ಹೋಗುತ್ತೇವೆ. ಬಿಜೆಪಿಯವರು ಇಂಥ ಮುತ್ತುರತ್ನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲಿ. ರಮೇಶ್ ಬೆಂಬಲಿಗರು ಏನು ಬೇಕಾದರೂ ಮಾಡಲಿ. ಅವರು ಮಾಡಿದಷ್ಟು ನಮಗೆ ಅನುಕೂಲವೇ. ಘಟನೆ ಕುರಿತು ಗೃಹಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಅವರು ಪ್ರತಿಕ್ರಿಯೆ ನೀಡಬೇಕು. ನೀಡಿದ್ದಾರಷ್ಟೇ ಎಂದು ರಮೇಶ್ ಜಾರಕಿಹೊಳಿ ಬೆಂಬಲಿಗರ ದಾಂಧಲೆ ಕುರಿತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.