ಗಣರಾಜ್ಯೋತ್ಸವ: ಈ ಬಾರಿಯ ವಿಶೇಷತೆ ಕುರಿತು ಪಾಲಿಕೆ ಆಯುಕ್ತ ಹೆಚ್.ಟಿ.ಅನಿಲ್ ಕುಮಾರ್ ವಿವರಣೆ - ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನ
ಬೆಂಗಳೂರು: ಜನವರಿ 26 ಕ್ಕೆ ಗಣರಾಜ್ಯೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಂದು ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕವಾಯತು ನಡೆಯಿತು. ಬಿಬಿಎಂಪಿ ವತಿಯಿಂದ ಸ್ವಚ್ಚ ಭಾರತ ಅಭಿಯಾನದ ಸಲುವಾಗಿ ಪೌರ ಕಾರ್ಮಿಕರಿಗೆ ಸನ್ಮಾನ, ದಾಳಿಗಳು ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ವಿವರಿಸಿದ್ರು. ಆಯುಕ್ತರ ಜೊತೆ ನಮ್ಮ ಪ್ರತಿನಿಧಿ ಭವ್ಯಾ ನಡೆಸಿರುವ ಚಿಟ್‌ಚಾಟ್ ವೀಕ್ಷಿಸಿ.