ಎರಡು ತಿಂಗಳಲ್ಲಿ ಹೆಚ್ಚಿನ ತೆರಿಗೆ ವಸೂಲಿಗೆ ಕ್ರಮ: ಮೈಸೂರು ಪಾಲಿಕೆ ಆಯುಕ್ತ - ಮೈಸೂರು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಗಡೆ
ಮೈಸೂರು: ಕಳೆದ ವರ್ಷವಿಡೀ ಕೊರೊನಾ ಕಾಟದಿಂದ ತೆರಿಗೆ ಸಂಗ್ರಹಕ್ಕೆ ಸಮಸ್ಯೆಯಾಗಿದೆ. ಪ್ರತಿವರ್ಷ 10 ರಿಂದ 12 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದ್ರೆ ಈ ಕಡಿಮೆ ವರ್ಷ ಸಂಗ್ರಹವಾಗುತ್ತಿದೆ. ಆದ್ದರಿಂದ ಪಾಲಿಕೆಯ ಎಲ್ಲಾ ವಲಯ ಕಛೇರಿಗಳಿಂದ ಅಧಿಕಾರಿಗಳು ವಾಣಿಜ್ಯ, ಮನೆ, ಖಾಲಿ ನಿವೇಶನಗಳಿಗೆ ಹೋಗಿ ಬಾಕಿ ಇರುವ ತೆರಿಗೆಯ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಕಛೇರಿ, ವಿದ್ಯುತ್ ಪ್ರಸರಣಾ ಕಛೇರಿಗಳು, ಛತ್ರಗಳು ಹಾಗು ಇತರೆ ವಾಣಿಜ್ಯ ಕಟ್ಟಡಗಳಲ್ಲಿ ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಕಟ್ಟುವವರೆಗೆ ಜಪ್ತಿ ಆದೇಶ ಮಾಡುತ್ತೇವೆ. ಇನ್ನು ಎರಡು ತಿಂಗಳು ಕಾಲಾವಕಾಶವಿದೆ. ಸ್ವಯಂ ಆಗಿ ಬಂದು ತೆರಿಗೆ ಕಟ್ಟಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ. ಸಾಧ್ಯವಾದಷ್ಟು ಉಳಿದಿರುವ ಎರಡು ತಿಂಗಳಲ್ಲಿ ಹೆಚ್ಚಿನ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಗಡೆ ತಿಳಿಸಿದರು.