ದಾಹ ತಣಿಸಿಕೊಳ್ಳಲು ಬಂದ ಹುಲಿರಾಯ: ನೀರಿನ ತೊಟ್ಟಿಗಿಳಿದು ಕೂಲ್ ಕೂಲ್ ಮಾಡಿಕೊಂಡ!! - undefined
ದಾಹ ತಣಿಸಿಕೊಳ್ಳಲು ನೀರಿನ ತೊಟ್ಟಿಯಲ್ಲಿ ಹುಲಿಯೊಂದು ಹೊರಳಾಡಿ ನಂತರ ಕಾಡಿನತ್ತಾ ಮುಖಮಾಡಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆಯಲ್ಲಿ ಪ್ರಾಣಿಗಳಿಗಾಗಿ ಕುಡಿಯಲು ನೀರಿನ ತೊಟ್ಟಿಕಟ್ಟಲಾಗಿದೆ. ನೀರು ಕುಡಿಯಲು ಬಂದ ಹುಲಿ ತೊಟ್ಟಿಯಲ್ಲಿಯೇ ಹೊರಳಾಡಿ, ಗಂಟಲಿನೊಂದಿಗೆ ದೇಹವನ್ನು ಕೂಲ್ ಮಾಡಿಕೊಂಡು ಹೋಗಿದೆ. ಕೆಲ ದಿನಗಳ ಹಿಂದೆ ನಾಗರಹೊಳೆಯಲ್ಲಿ ಭರ್ಜರಿ ಮಳೆಯಾಗಿ, ಹಸಿರು ಚಿರುಗುತ್ತಿದೆ. ಆದರೂ ಬೇಸಿಗೆ ಕಾವು ಹೆಚ್ಚಿರುವ ಕಾರಣ ದೇಹವನ್ನು ತಂಪು ಮಾಡಲು ಹೀಗೆ ಮಾಡಿದ್ದು ವಿಶೇಷವಾಗಿತ್ತು..