ವಾಯ್ಸ್ ರೆಕಾರ್ಡ್ ಮಾಡಿ, ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ - ಹುಬ್ಬಳ್ಳಿ ಕ್ರೈಂ ನ್ಯೂಸ್
ಆಕೆಗಿನ್ನು 28 ವರ್ಷ, ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಕಳೆದಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂಸಾರ ನಡೆಸಬೇಕಿದ್ದ ಆಕೆ ನೇಣಿಗೆ ಶರಣಾಗಿದ್ದಾಳೆ. ವಾಯ್ಸ್ ರೆಕಾರ್ಡ್( ಧ್ವನಿ ಮುದ್ರಿಕೆ) ಹಾಗೂ ಆಕೆ ಬರೆದಿದ್ದು ಎನ್ನಲಾದ ಡೆತ್ ನೋಟ್ ಆಧರಿಸಿ ಆಕೆಯ ಗಂಡನ ಮನೆಯವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪವೂ ವ್ಯಕ್ತವಾಗ್ತಿದೆ.