60 ವರ್ಷವಾದ್ಮೇಲೆ ಮೊಳಕಾಲ್ಮೂರಿಗೆ ಮಂತ್ರಿಭಾಗ್ಯ! ಈಗಲಾದರೂ.. - ಶ್ರೀರಾಮುಲು
ಮೊಳಕಾಲ್ಮೂರು ರಾಜ್ಯ ರಾಜಕೀಯ ಇತಿಹಾಸದಲ್ಲಿ ತನ್ನದೇ ಚಾಪು ಮೂಡಿಸಿದೆ. ಎಸ್.ನಿಜಲಿಂಗಪ್ಪ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಕೂಡ ಇದೇ ಮೊಳಕಾಲ್ಮೂರು ಕ್ಷೇತ್ರದಿಂದಲೇ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಪದೇ ಪದೇ ತೀವ್ರ ಬರದಿಂದ ಕಂಗೆಟ್ಟ ಅತೀ ಹಿಂದುಳಿದ ಪ್ರದೇಶವಿದು. 60 ವರ್ಷದಿಂದ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ ಅನ್ನೋದು ಸ್ಪಷ್ಟ. ಆದರೆ, ಈಗಲಾದರೂ ಅಭಿವೃದ್ದಿಯಾಗುತ್ತಾ? ಎನ್ನುವುದನ್ನು ಜನರು ಆಸೆ ಕಂಗಳಿಂದ ಎದುರು ನೋಡುತ್ತಿದ್ದಾರೆ.