ಚಿತ್ರದುರ್ಗ: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ - Chitradurga
ಚಿತ್ರದುರ್ಗ: ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ನಿಮಿತ್ತ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹೊನ್ನೇಕೆರೆ ಗ್ರಾಮದಲ್ಲಿ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಡೆಯಿತ್ತು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸಾರಥ್ಯದಲ್ಲಿ ಎರಡನೇ ವರ್ಷದ ಸ್ಪರ್ಧೆ ನೆರವೇರಿತು. ರಾಜ್ಯದ ವಿವಿಧೆಡೆಗಳಿಂದ 100ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿದ್ದರು. ಪ್ರಥಮ ಬಹುಮಾನವಾಗಿ 1.ಲಕ್ಷ , ದ್ವಿತೀಯ ಬಹುಮಾನ 70 ಸಾವಿರ, ತೃತೀಯ ಬಹುಮಾನ 40 ಸಾವಿರ ಹಣ ನೀಡಲಾಯಿತು.
Last Updated : Feb 3, 2023, 8:21 PM IST