ಅಭಿಮಾನಿಗಳ ಜೊತೆ ಜೇಮ್ಸ್ ಸಿನಿಮಾ ವೀಕ್ಷಿಸಿದ ಸೆಂಚುರಿ ಸ್ಟಾರ್ ಹಾಗು ರಿಯಲ್ ಸ್ಟಾರ್ - Century Star and Real Star to Watch James Cinema with Fans!
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪವರ್ ಸ್ಟಾರ್ ನಟನೆಯ ಕೊನೆಯ ಚಿತ್ರವಾಗಿರೋ, ಈ ಚಿತ್ರದಲ್ಲಿ ಅಪ್ಪು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯಶಸ್ವಿ ಪ್ರದರ್ಶನ ಜೊತೆಗೆ ನೂರು ಕೋಟಿ ಕ್ಲಬ್ ಸೇರಿರುವ ಜೇಮ್ಸ್ ಚಿತ್ರವನ್ನು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳೊಂದಿಗೆ ವೀಕ್ಷಿಸಿದ್ದಾರೆ. ಜೊತೆಗೆ ನಿರ್ದೇಶಕ ಚೇತನ್ ಕುಮಾರ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗು ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಇವರಿಗೆ ಸಾಥ್ ನೀಡಿದ್ದಾರೆ.
Last Updated : Feb 3, 2023, 8:21 PM IST
TAGGED:
ಜೇಮ್ಸ್ ಕನ್ನಡ ಸಿನೆಮಾ