ಟ್ರಂಪ್, ಮೋದಿ, ಪಿಂಗ್, ಪುಟಿನ್ಗೆ ಎಚ್ಚರಿಕೆಯ ಅಲರಾಂ... 2021ರ ಈ ಮಹಾಮಾರಿಗೆ ಸಜ್ಜಾಗಿ..! - ನಿಧಾನಗತಿಯ ಆರ್ಥಿಕತೆ
ಕೆಲವು ಆರ್ಥಿಕ ಚಿಂತಕರು ಅಧ್ಯಕ್ಷ ಟ್ರಂಪ್ ಅವರ ನೀತಿಗಳನ್ನು ಖಂಡಿಸಿ ಕಳವಳ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಿಷ್ಠ ಆರ್ಥಿಕತೆ ಪ್ರವರ್ಧಮಾನಕ್ಕೆ ಬರಲಿದೆ. ಗ್ರಾಹಕ ವಲಯದ ಉತ್ಪನ್ನಗಳ ಮಾರಾಟ ಜುಲೈಗೆ ಶೇ 6ಕ್ಕೆ ಇಳಿಕೆ ಆಗಿದೆ. ನಿಧಾನಗತಿಯ ಆರ್ಥಿಕತೆಯ ಬಗ್ಗೆ ಎಚ್ಚೆತುಕೊಂಡ ಡೊನಾಲ್ಡ್ ಟ್ರಂಪ್ ಕಳೆದ ಸೋಮವಾರ ನಡೆದ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವಂತೆ ಫೆಡರಲ್ ರಿಸರ್ವ್ ತಜ್ಞರಿಗೆ ಸೂಚಿಸಿದ್ದಾರೆ.