ಭಾರತದ ಚಿಕನ್ ಮಾರುಕಟ್ಟೆ ಮೇಲೆ ಅಮೆರಿಕ ಕೆಂಗಣ್ಣು: ಕುಕ್ಕುಟೋದ್ಯಮ ಪಾಲು ಕಸಿಯಲು ಯತ್ನ, ಮೊಟ್ಟೆ ಆಯೋಗ ಕಿಡಿ - ಭಾರತಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ
ಕೋಳಿಯ ಬಿಳಿ ಮಾಂಸ ಆರೋಗ್ಯಯುಕ್ತವಾದದ್ದು. ಅಮೆರಿಕ ಇದಕ್ಕೆ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಕಪ್ಪು ಮಾಂಸ ಮತ್ತು ಬಿಳಿ ಮಾಂಸದ ಮಧ್ಯ ಸಾಧಾರಣ ವ್ಯತ್ಯಾಸವಿದೆ. ಇದಕ್ಕೆ ಶೇ 50-60ರಷ್ಟು ಪ್ರೀಮಿಯಂ ಬರುತ್ತೆ. ಕಪ್ಪು ಮಾಂಸಕ್ಕೆ ಬಿಳಿ ಮಾಂಸಕ್ಕಿಂತ ಹೆಚ್ಚು ಬೇಡಿಕೆ ಇದೆ. ಕಪ್ಪು ಮಾಂಸಕ್ಕೆ ಪ್ರತ್ಯೇಕ ಮಾರುಕಟ್ಟೆಯನ್ನು ಸೃಷ್ಟಿಸುವತ್ತ ಅಮೆರಿಕ ದೃಷ್ಟಿ ನೆಟ್ಟಿದೆ. ಭಾರತಕ್ಕೆ ಕಪ್ಪು ಮಾಂಸ ರಫ್ತು ಮಾಡಿ ಅಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು. ಕೃತಕ ಅಭಾವದಿಂದ ಬೇಡಿಕೆ ಅಧಿಕವಾದಂತೆ ಪ್ರೀಮಿಯಂ ಏರಿಕೆಯಾಗುತ್ತೆ ಎಂಬ ಮಾರುಕಟ್ಟೆ ಹುನ್ನಾರ ಇದೆ ಎಂದು ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಅಧ್ಯಕ್ಷ ಸುರೇಶ್ ಚಿಟ್ಟುರಿ ಹೇಳಿದರು.