ಮಳೆ ಎಫೆಕ್ಟ್ಗೆ ದಿಢೀರ್ ಗಗನಕ್ಕೇರಿದ ಟೊಮೆಟೊ: ಗ್ರಾಹಕರ ಜೇಬಿಗೆ ಕತ್ತರಿ! - ದೆಹಲಿಯಲ್ಲಿ ಟೊಮಾಟೆ ದರ
ನವದೆಹಲಿ: ಮಾನ್ಸೂನ್ ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ. ದರಿಯಾಗಂಜ್ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 50 ರೂ.ಯಂತೆ ಮಾರಾಟ ಆಗುತ್ತಿದೆ. ಇತರೆ ಅಗತ್ಯ ಸರಕುಗಳು ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿರುವುದರಿಂದ ಸ್ಥಳೀಯ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಮಳೆಯ ಕಾರಣದಿಂದಾಗಿ ಟೊಮೆಟೊವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.