ಕಳೆಗುಂದಿದ ಬಂಧನದ ಬೆಸುಗೆ ಗಟ್ಟಿಗೊಳಿಸಿದ ಮೋದಿ- ಜಿನ್ಪಿಂಗ್ ಭೇಟಿ
ಭಾರತ- ಚೀನಾ ನಡುವೆ ಸುಮಾರು 2,000 ವರ್ಷಗಳ ನಂಟಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅನೌಪಚಾರಿಕ ಶೃಂಗಸಭೆಗಾಗಿ 2 ದಿನ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ- ಕ್ಸಿ ಜಿನ್ಪಿಂಗ್ ಅವರ ಅನೌಪಚಾರಿಕ ಮಾತುಕತೆಯಿಂದ ಭಾರತ- ಚೀನಾದ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಮೆರಿಕ, ಭಾರತ- ಚೀನಾದ ಮೇಲೆ ಹೇರಿರುವ ವಾಣಿಜ್ಯ ನಿರ್ಬಂಧ ಸುಧಾರಣೆಯ ಪೂರಕ ಮಾತುಕತೆಗಳು ನಡೆಯಲಿವೆ.