ಆರ್ಥಿಕತೆ ಮೇಲೆ ಈಗ ಈರುಳ್ಳಿ ಬರೆ.. ಕೆಜಿ ಈರುಳ್ಳಿಗೆ 80 ರೂ. - ಈರುಳ್ಳಿ
ಕರ್ನಾಟಕ, ಮಹಾರಾಷ್ಟ್ರ, ಬಿಹಾರದಲ್ಲಿ ಇತ್ತೀಚೆಗೆ ಉಂಟಾದ ಭಾರಿ ಪ್ರವಾಹದ ಬಳಿಕ ಆಹಾರ ಪದಾರ್ಥಗಳ ಅಭಾವ ದೇಶಾದ್ಯಂತ ವ್ಯಾಪಿಸತೊಡಗಿದೆ.ಉತ್ಪಾದನೆ ಮತ್ತು ದಾಸ್ತಾನು ಕೊರತೆಯಿಂದಾಗಿ ಈರುಳ್ಳಿ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರವಷ್ಟೆ ಪ್ರತಿ ಕೆಜಿ 57 ರೂ. ಇದ್ದ ಈರುಳ್ಳಿ ಬೆಲೆ ಇಂದು 70ರಿಂದ 80 ರೂ. ನಡುವೆ ಮಾರಾಟ ಆಗುತ್ತಿದೆ. ಈರುಳ್ಳಿ ದರ ಏರಿಕೆಯಾಗಿ ಮಂಡಿಗಳಲ್ಲಿ ದಾಸ್ತಾನು ಕಡಿಮೆ ಆಗುತ್ತಿರುವುದರಿಂದ ಕೇಂದ್ರ ಸರ್ಕಾರವು ತರಕಾರಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.