ಬಿಜೆಪಿ, ಶಿವಸೇನೆ ಬುಡ ಅಲುಗಾಡಿಸಿದ 'ಈರುಳ್ಳಿ'... ಉಳ್ಳಾಗಡ್ಡಿ ಹೆಸರು ಕೇಳಿದ್ರೆ ಸೋತವರ ಕಣ್ಣೀರು - ಈರುಳ್ಳಿ
ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಕ್ರಮಗಳು ಈರುಳ್ಳಿ ಬೆಳೆಯ ಪ್ರಾಬಲ್ಯವಿರುವ ನಾಸಿಕ್‌ನ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ-ಶಿವ ಸೇನಾ ಮೈತ್ರಿಕೂಟ ಬಲವಾದ ಪೆಟ್ಟು ತಿಂದಿದೆ. ಕೋಪಗೊಂಡ ರೈತರು ಬಿಜೆಪಿ- ಶಿವಸೇನೆಗೆ ಪಾಠ ಕಲಿಸಲು ಎನ್ಸಿಪಿ ಕೈಹಿಡಿದಿದ್ದಾರೆ. ಪರಿಣಾಮ ಬಿಜೆಪಿಯ ತನ್ನ ಸ್ಥಾನಗಳನ್ನು ಉಳಿಸಿಕೊಂಡಿದ್ದರೂ ಅಭ್ಯರ್ಥಿಗಳ ಗೆಲುವಿನ ಅಂತರ ತೀರಾ ಕಡಿಮೆಯಾಗಿದೆ. ಶಿವಸೇನೆ 2 ಹಾಗೂ ಸಿಪಿಎಂ ಒಂದು ಕ್ಷೇತ್ರವನ್ನು ಕಳೆದುಕೊಂಡಿವೆ. ಟನ್‌ಗೆ ₹ 850 ಕನಿಷ್ಠ ರಫ್ತು ಬೆಲೆ ನಿಗದಿಪಡಿಸಿತ್ತು. ಇದಾದ ಬಳಿಕ ವ್ಯಾಪಾರಿಗಳ ಮೇಲೆ ದಾಸ್ತಾನು ಮಿತಿಯನ್ನು ನಿಗದಿಪಡಿಸಿತ್ತು. ಈ ಎಲ್ಲ ಕ್ರಮಗಳ ಪರಿಣಾಮವಾಗಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಸುಮಾರು ₹ 2,500-2,600 ಕುಸಿಯಿತು. ಇದರಿಂದ ಕೋಪಗೊಂಡ ರೈತರು ಸರ್ಕಾರದ ವಿರುದ್ಧವೇ ತಿರುಗಿಬಿದ್ದರು.