35,000 ಗಡಿ ದಾಟಿದ ಸೆನ್ಸೆಕ್ಸ್, 17ನೇ ದಿನವೂ ಇಂಧನ ಬೆಲೆ ಏರಿಕೆ: ದೇಶದ ಸಂಕ್ಷಿಪ್ತ ಮಾರ್ಕೆಟ್ ಚಿತ್ರಣ ಇಲ್ಲಿದೆ! - ವಾಣಿಜ್ಯ ಸುದ್ದಿ
ನವದೆಹಲಿ: ಮಾರ್ಚ್ 11ರ ನಂತರ ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 35,000 ಅಂಕ ಗಡಿದಾಟಿದೆ. ಅದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಮುಂದುವರೆದಿದೆ. ಕಳೆದ 17 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 8.5 ರೂ ಮತ್ತು ಡೀಸೆಲ್ 10.01 ರೂ.ಅಷ್ಟು ಹೆಚ್ಚಳವಾಗಿದೆ. ಡಾಲರ್ ಎದುರು ರೂಪಾಯಿ 37 ಪೈಸೆ ಏರಿಕೆ ಮುಖೇನ ಸುಮಾರು 2 ವಾರಗಳ ಗರಿಷ್ಠ ಹೆಚ್ಚಳವಾಗಿದೆ. ಪ್ರತಿ ಡಾಲರ್ 75.66 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಪ್ರತಿ ಬ್ಯಾರೆಲ್ ಮೇಲೆ ಶೇ 0.67 ಡಾಲರ್ ಏರಿಕೆಯಾಗಿ 43.37 ಡಾಲರ್ಗೆ ತಲುಪಿದೆ. ಎಂಸಿಎಕ್ಸ್ ಫ್ಯೂಚರ್ ಮಾರುಕಟ್ಟೆಯ 10 ಗ್ರಾಂ. ಚಿನ್ನದ ದರ ₹ 47,965 ಆಗಿದ್ದು, 21 ರೂ.ಅಷ್ಟು ಏರಿಕೆ ಕಂಡಿದೆ. ಕೆ.ಜಿ ಬೆಳ್ಳಿಯ ದರ ₹ 48,441 ಗೆ ತಲುಪಿ 59 ರೂ.ಅಷ್ಟು ಇಳಿಕೆ ಕಂಡಿದೆ.