ಮಾರುಕಟ್ಟೆ ರೌಂಡಪ್: ಅಮೆರಿಕದ ಫೆಡ್ ಹೊಡತಕ್ಕೆ ಸೆನ್ಸೆಕ್ಸ್ ತತ್ತರ - ಸ್ಟಾಕ್ ಮಾರುಕಟ್ಟೆ
ಅಮೆರಿಕದ ಫೆಡ್ನ ಆರ್ಥಿಕ ಮುನ್ನೋಟದ ದೃಷ್ಟಿಕೋನದಲ್ಲಿ ಹಿನ್ನಡೆ ಕಂಡುಬರುತ್ತಿದ್ದಂತೆ ವಿಶ್ವದಾದ್ಯಂತ ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ತತ್ಪರಿಣಾಮ ದೇಶೀಯ ಈಕ್ವಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್ ಗುರುವಾರ 394 ಅಂಕ ಕುಸಿದು 38,220.39 ಅಂಕಗಳ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 96.20 ಅಂಕ ಇಳಿಕೆಯಾಗಿ 11,312.20 ಅಂಕಗಳಲ್ಲಿ ಕೊನೆಗೊಂಡಿತು.