ಮಾರುಕಟ್ಟೆ ರೌಂಡಪ್: ಸೆನ್ಸೆಕ್ಸ್ ಜಿಗಿತ, ಚಿನ್ನ, ಪೆಟ್ರೋಲ್, ಡೀಸೆಲ್ ದರದ ಕ್ವಿಕ್ ಲುಕ್! - ಇಂದಿನ ಚಿನ್ನದ ದರ
ಮುಂಬೈ: ಜೋಸೆಫ್ ಬೈಡನ್ ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾಗುವ ಪ್ರಬಲ ಸಾಧ್ಯತೆಯನ್ನು ಕಂಡುಕೊಂಡ ಹೂಡಿಕೆದಾರರು, ಮಾರುಕಟ್ಟೆಯ ಎಲ್ಲಾ ವಿಭಾಗಗಳು ಮತ್ತು ವಲಯಗಳಲ್ಲಿ ಖರೀದಿಯ ಭರಾಟೆಯಲ್ಲಿ ತೊಡಗಿದರು. ಇದರಿಂದ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿತು. ಗುರುವಾರ ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 724.02 ಅಂಕ ಏರಿಕೆಯಾಗಿ 41340.16 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 219.10 ಅಂಕ ಜಿಗಿದು 12127.60 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.