ಮಾರುಕಟ್ಟೆ ರೌಂಡಪ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದ ರಿಲಯನ್ಸ್ ಷೇರು ಮೌಲ್ಯ! - ಇಂಧನ ಬೆಲೆ
ಆರ್ಥಿಕತೆಯನ್ನು ಬೆಂಬಲಿಸಲು ಸರ್ಕಾರದ ಹೊಸ ಉತ್ತೇಜನೆಯ ಭರವಸೆಯ ಮಧ್ಯೆ ಮುಂಬೈ ಷೇರು ಸೂಚ್ಯಂಕದ ಹೆವಿವೇಯ್ಟ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಾಕ್ ಬ್ಯಾಂಕ್ಗಳ ಲಾಭದ ಕಾರಣ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 269 ಅಂಕ ಏರಿಕೆ ಕಂಡಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 82.85 ಅಂಕ ಜಿಗಿದು 11,215.45 ಅಂಕ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ.3ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ ಮಟ್ಟ 2,060.65 ರೂ.ಯಷ್ಟಾಗಿದೆ.