ಕರ್ನಾಟಕ

karnataka

ETV Bharat / videos

ಮಾರುಕಟ್ಟೆ ರೌಂಡಪ್​: ವಿದೇಶಿ ನಿಧಿಯ ಒಳಹರಿವಿಗೆ 258 ಅಂಕ ಜಿಗಿದ ಸೆನ್ಸೆಕ್ಸ್​!

By

Published : Sep 16, 2020, 5:57 PM IST

ಮುಂಬೈ: ವಿದೇಶಿ ನಿಧಿಯ ಒಳಹರಿವಿನ ಮಧ್ಯೆ ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಎಂ&ಎಂ ಷೇರುಗಳ ಲಾಭದ ಹಿನ್ನೆಲೆಯಲ್ಲಿ ದೇಶೀಯ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರ 258 ಅಂಕ ಏರಿಕೆ ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕವು 258.50 ಅಂಕ ಅಥವಾ ಶೇ 0.66ರಷ್ಟು ಹೆಚ್ಚಳವಾಗಿ 39,302.85 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 82.75 ಅಂಕ ಜಿಗಿದು 11,604.55 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ABOUT THE AUTHOR

...view details