ಮಾರುಕಟ್ಟೆ ರೌಂಡಪ್: ಇಂದಿನ ಷೇರುಪೇಟೆ, ಪೆಟ್ರೋಲ್, ಚಿನ್ನಾಭರಣ ದರ ಹೀಗಿದೆ - ಇಂಧನ ಬೆಲೆ
ಮುಂಬೈ: ಮಾರುಕಟ್ಟೆ ಮಾನದಂಡ ಬಿಎಸ್‌ಇ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 300 ಅಂಕ ಏರಿಕೆಯಾಗಿ ಮತ್ತೆ 40,000 ಅಂಕಗಳ ಗಡಿದಾಟಿದೆ. ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್ 400 ಅಂಕ ಏರಿದ್ದು, ಅಂತಿಮವಾಗಿ 303.72 ಅಂಕ ಹೆಚ್ಚಳವಾಗಿ 40,182.67 ಅಂಕಗಳಿಗೆ ತಲುಪಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 95.75 ಅಂಕ ಅಥವಾ ಶೇ 0.82ರಷ್ಟು ಏರಿಕೆ ಕಂಡು 11,834.60 ಅಂಕಗಳಲ್ಲಿ ಕೊನೆಗೊಳಿಸಿತು.