ಮಾರುಕಟ್ಟೆ ರೌಂಡಪ್: 1,066 ಕುಸಿತದ ಬಳಿಕ 254 ಅಂಕ ಜಿಗಿದ ಸೆನ್ಸೆಕ್ಸ್! - ಇಂದಿನ ಬೆಳ್ಳಿ ದರ
ಮುಂಬೈ: ಸುಮಾರು ಆರು ವರ್ಷಗಳಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ತಮ್ಮ ಸುದೀರ್ಘ ಗೆಲುವಿನ ಹಾದಿ ಏಕಾಏಕಿ ನಿಲ್ಲಿಸಿದ ಒಂದು ದಿನದ ಬಳಿಕ ದೇಶೀಯ ಷೇರು ಮಾರುಕಟ್ಟೆ ಹಣಕಾಸು ಮತ್ತು ಲೋಹದ ಷೇರುಗಳ ನೇತೃತ್ವದಲ್ಲಿ ಮತ್ತೆ ಪುಟಿದೆದ್ದವು. ಶುಕ್ರವಾರದ ವಹಿವಾಟಿನಂದು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ ಶೇ 1ರಷ್ಟು ಅಥವಾ 254.57 ಅಂಕ ಜಿಗಿದು 39,982.98 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ-50 ಮಾನದಂಡವು 82.10 ಅಂಕ ಹೆಚ್ಚಳವಾಗಿ 11,762.45 ಅಂಕಗಳಿಗೆ ಏರಿಕೆಯಾಯಿತು.