ಮಾರ್ಕೆಟ್ ರೌಂಡಪ್: ಕೊರೊನಾ ಆರ್ಭಟದ ಮಧ್ಯೆ 329 ಅಂಕ ಜಿಗಿದ ಸೆನ್ಸೆಕ್ಸ್, ₹ 80ರ ಗಡಿಯಲ್ಲಿ ಪೆಟ್ರೋಲ್ - Today Share market
ಶುಕ್ರವಾರ ವಹಿವಾಟಿನಂದು ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 329 ಅಂಕ ಏರಿಕೆಯಾಗಿ 35,171 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 94.10 ಅಂಕ ಏರಿಕೆಯಾಗಿ 10,383 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ತೈಲ ಕಂಪೆನಿಗಳು ತಮ್ಮ ವೆಚ್ಚಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 80 ರೂ. ಗಡಿ ದಾಟಿದೆ. ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ. ಮೇಲೆ ಶೇ 0.11 ಇಳಿಕೆಯಾಗಿ 47,889 ರೂ.ಗೆ ತಲುಪಿದೆ.