ಮಾರುಕಟ್ಟೆ ರೌಂಡಪ್: ಏಕಾಏಕಿ 629 ಅಂಕ ಜಿಗಿದ ಸೆನ್ಸೆಕ್ಸ್ - ಇಂದಿನ ಮಾರುಕಟ್ಟೆ
ಮುಂಬೈ: ದೇಶಾದ್ಯಂತ ಅನ್ಲಾಕ್ 0.5 ಜಾರಿ ಆಗುತ್ತಿದ್ದಂತೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 629 ಅಂಕಗಳ ಏರಿಕೆ ದಾಖಲಿಸಿದೆ. 30 ಷೇರುಗಳ ಮುಂಬೈ ಸೂಚ್ಯಂಕ ಬಿಎಸ್‌ಇ ಸೂಚ್ಯಂಕ 629.12 ಅಂಕ ಏರಿಕೆ ಕಂಡು 38,697.05 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 169.40 ಅಂಕ ಜಿಗಿದು 11,416.95 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.