ಮಾರುಕಟ್ಟೆ ರೌಂಡಪ್: ಸೆನ್ಸೆಕ್ಸ್ ಜಿಗಿತ, ಚಿನ್ನ, ಪೆಟ್ರೋಲ್, ಡೀಸೆಲ್ ದರದ ಕ್ವಿಕ್ ಲುಕ್!
ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಕಂಡುಬಂದಿದ್ದು, ದೇಶಿ ಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಕೊಟಕ್ ಬ್ಯಾಂಕ್ಗಳ ಲಾಭದ ಗಳಿಕೆ ನಂತರು ಸೆನ್ಸೆಕ್ಸ್ ಏರಿಕೆ ದಾಖಲಿಸಿದೆ. ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 355.01 ಅಂಕ ಏರಿಕೆಯಾಗಿ 40,616.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 95 ಅಂಕ ಏರಿಕೆಯಾಗಿ 11,908.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.