ಮಾರುಕಟ್ಟೆ ರೌಂಡಪ್: 173 ಅಂಕ ಗಳಿಕೆ ಕಂಡ ಮುಂಬೈ ಸೆನ್ಸೆಕ್ಸ್ - ಪೆಟ್ರೋಲ್ ಡೀಸೆಲ್ ಬೆಲೆ
ಸೋಮವಾರದ ವಹಿವಾಟಿನಂದು ವಿದ್ಯುತ್, ಲೋಹ ಮತ್ತು ಆಟೋ ಷೇರುಗಳಲ್ಲಿನ ಲಾಭಾಂಶವು ಬ್ಯಾಂಕಿಂಗ್ ವಲಯದ ಷೇರುಗಳು ನಷ್ಟ ಅನುಭವಿಸಿದ್ದರೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸಕರಾತ್ಮಕವಾಗಿ ಕೊನೆಗೊಂಡಿತು. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ಚಂಚಲತೆಯಿಂದ ಹೊರಬಂದು ಸುಮಾರು ಮಧ್ಯಂತರ ಅವಧಿಯಲ್ಲಿ 386 ಅಂಶಗಳಷ್ಟು ಗಳಿಸಿತು. ಅಂತಿಮವಾಗಿ ಸೂಚ್ಯಂಕವು 173.44 ಅಂಕ ಹೆಚ್ಚಳವಾಗಿ 38,050.78 ಅಂಕಗಳಿಗೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 68.70 ಅಂಕ ಏರಿಕೆ ಕಂಡು 11,247.10 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.