ಮಾರುಕಟ್ಟೆ ರೌಂಡಪ್: ₹ 1,317 ಕುಸಿದ ಚಿನ್ನ... ಇದಕ್ಕೂ ದುಪ್ಪಟ್ಟು ದರದಲ್ಲಿ ಬೆಳ್ಳಿ ಕ್ಷೀಣ!
ಈಕ್ವಿಟಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು 225 ಅಂಕ ಏರಿಕೆ 38,407.01 ಅಂಕ ತಲುಪಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಕೂದ 52.35 ಅಂಕ ಏರಿಕೆಯಾಗಿ 11,322.50 ಅಂಕ ತಲುಪಿದೆ. ಹಣಕಾಸು ಮತ್ತು ಉಕ್ಕು ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 1,317 ರೂ. ಇಳಿಕೆಯಾಗಿ 54,763 ರೂ. ತಲುಪಿದೆ. ಕೆ.ಜಿ. ಬೆಳ್ಳಿ ಮೇಲೆ ₹ 2,943 ಕುಸಿದು 73,600 ರೂ. ಮಟ್ಟದಲ್ಲಿ ವಹಿನಾಟು ನಡೆಸುತ್ತಿದೆ.