ಮಾರುಕಟ್ಟೆ ರೌಂಡಪ್: ಸತತ 7ನೇ ದಿನವೂ ಗೂಳಿ ನಾಗಾಲೋಟ! - Today Silver prices
ಮುಂಬೈ: ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಶೇ 90ರಷ್ಟು ಯಶಸ್ಸು ಸಾಧಿಸಿದ್ದಾಗಿ ಅಮೆರಿಕದ ಫೈಜರ್ ಮತ್ತು ಬಯೋ ಆ್ಯಂಡ್ ಟೆಕ್ ಕಪನಿಗಳು ಜಂಟಿ ಹೇಳಿಕೆಯು ದೇಶಿ ಷೇರುಪೇಟೆಯು ದಾಖಲೆಯ ಏರಿಕೆ ಕಂಡಿದೆ. ಎಸ್‌ಇ ಸೆನ್ಸೆಕ್ಸ್ ದಿನದ ಅಂತ್ಯದ ವೇಳೆಗೆ 680.20 ಅಂಕ ಏರಿಕೆಯಾಗಿ 43,278 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 170 ಅಂಕ ಏರಿಕೆಯಾಗಿ 12,631.10 ಅಂಕಗಳ ಮಟ್ಟದಲ್ಲಿ ಕೊನೆಗೊಂಡವು. ಇದೇ ಮೊದಲ ಬಾರಿಗೆ ಈಕ್ವಿಟಿ ಬೆಂಚ್ ಮಾರ್ಕ್ಗಳು ಸಾರ್ವಕಾಲಿದ ಗರಿಷ್ಠ ಮಟ್ಟ ತಲುಪಿದವು.