ಮಾರುಕಟ್ಟೆ ರೌಂಡಪ್: ಸತತ ಎರಡನೇ ದಿನವೂ ಕುಸಿದ ಸೆನ್ಸೆಕ್ಸ್ - Today Share Market
ಮುಂಬೈ: ಮಿಶ್ರ ಜಾಗತಿಕ ಸೂಚನೆಗಳ ಮಧ್ಯೆ ಹೂಡಿಕೆದಾರರು ಬ್ಯಾಂಕಿಂಗ್, ಹಣಕಾಸು ಮತ್ತು ಉಪಭೋಗದ ಷೇರುಗಳ ಮೌಲ್ಯ ಕುಸಿತದಿಂದಾಗಿ ಸತತ ಎರಡನೇ ದಿನದ ವಹಿವಾಟಿನಂದು ಈಕ್ವಿಟಿ ಬೆಂಚ್ ಮಾರ್ಕ್ ನಷ್ಟ ಅನುಭವಿಸಿವೆ. ಮುಂಬೈ ಷೇರು ಸೂಚ್ಯಂಕ 134.03 ಅಂಕ ಕುಸಿದು 38,845.82 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 11.15 ಅಂಕ ಇಳಿಕೆಯಾಗಿ 11,504.95 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.