20 ಅಂಕ ಜಿಗಿದರೂ ನಿಫ್ಟಿ ಸಾರ್ವಕಾಲಿಕ ದಾಖಲೆ: ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್ ರೇಟ್ - Market Roundup
ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಸೂಚನೆಗಳ ಮಧ್ಯೆ ದೇಶೀಯ ಈಕ್ವಿಟಿ ಮಾನದಂಡಗಳು ಗುರುವಾರದ ವಹಿವಾಟಿನಂದು ಅಲ್ಪ ಏರಿಕೆ ದಾಖಲಿಸಿವೆ. ಮಧ್ಯಾಂತರ ಟ್ರೇಡಿಂಗ್ನಲ್ಲಿ ಗರಿಷ್ಠ 44,953.01 ಅಂಕಂಗಳಿಗೆ ತಲುಪಿದ ನಂತರ ಬಿಎಸ್ಇ ಸೆನ್ಸೆಕ್ಸ್ 14.61 ಅಂಕಗಳ ಅಲ್ಪ ಏರಿಕೆಯಾಗಿ 44,632.65 ಅಂಕಗಳಿಗೆ ತಲುಪಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 20.15 ಅಂಕ ಏರಿಕೆಯಾಗಿ 13,216.60 ಅಂಕಗಳೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು.