ಮಾರುಕಟ್ಟೆ ರೌಂಡಪ್: 394 ಅಂಕ ಇಳಿಕೆ ಬಳಿಕ 215 ಅಂಕ ಜಿಗಿದ ಸೆನ್ಸೆಕ್ಸ್!
ಜಾಗತಿಕ ಮಾರುಕಟ್ಟೆಯ ನಕರಾತ್ಮಕತೆ ಹಾಗೂ ಬಿಎಸ್ಇನ ಹೆವಿವೇಯ್ಟ್ ಷೇರುಗಳಾದ ಹೆಚ್ಡಿಎಫ್ಸಿ ಟ್ವಿನ್ಸ್ ಹಾಗೂ ಏಷ್ಯನ್ ಪೇಯಿಂಟ್ಸ್ ಷೇರುಗಳ ಖರೀದಿ ಭರಾಟೆ ಕಂಡುಬಂತು. ವಹಿವಾಟಿನ ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್ ಗರಿಷ್ಠ 395 ಅಂಕಗಳ ಮಟ್ಟಕ್ಕೆ ತಲುಪಿತ್ತು. ದಿನದ ಅಂತ್ಯದ ವೇಳೆಗೆ 214.33 ಅಂಕ ಏರಿಕೆಯೊಂದಿಗೆ 38,434.72 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 59.40 ಅಂಕ ಜಿಗಿತದೊಂದಿಗೆ 11,371.60 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.