ಮಾರುಕಟ್ಟೆ ರೌಂಡಪ್: 5 ದಿನಗಳಲ್ಲಿ 2,279 ಅಂಕ ಜಿಗಿದ ಸೆನ್ಸೆಕ್ಸ್! - ಇಂದಿನ ಚಿನ್ನದ ದರ
ಮುಂಬೈ: ಕಳೆದ ಐದು ದಿನಗಳ ಷೇರು ವಹಿವಾಟಿನಲ್ಲಿ ಮುಂಬೈ ಷೇರು ಸೂಚ್ಯಂಕ ಏರುಗತಿಯಲ್ಲಿ ಸಾಗುತ್ತಾ ಬಂದಿದ್ದು, ಒಟ್ಟಾರೆ 2,279 ಅಂಕಗಳಷ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ಸಹ 627 ಅಂಕಗಳಷ್ಟು ಏರಿಕೆಯಾಗಿದೆ. ವಾರಾಂತ್ಯದ ಶುಕ್ರವಾರದ ವಹಿವಾಟಿನಂದು ಸೆನ್ಸೆಕ್ಸ್ 552.90 ಅಂಕ ಏರಿಕೆಯಾಗಿ 41,893.06 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 143.25 ಅಂಕ ಹೆಚ್ಚಳವಾಗಿ 12,263.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.