ಮಾರುಕಟ್ಟೆ ರೌಂಡಪ್ : ಸೆನ್ಸೆಕ್ಸ್ ಏರಿಕೆ, ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ದರ ಹೀಗಿದೆ..
ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ನಷ್ಟದಿಂದ ಚೇತರಿಸಿಕೊಂಡಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗ ಅಲ್ಪ ಏರಿಕೆ ದಾಖಲಿಸಿತು. 30 ಷೇರುಗಳ ಬಿಎಸ್‌ಇ ಸೂಚ್ಯಂಕವು 9.71 ಅಂಕ ಹೆಚ್ಚಳವಾಗಿ 46,263.17 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ 9.70 ಅಂಕ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 13,567.85 ಅಂಕಗಳಿಗೆ ತಲುಪಿತು.