ಶತಮಾನದ ಹೊಸ್ತಿಲಲ್ಲಿ ಸಾಮಾನ್ಯ ಬಜೆಟ್ ಜತೆ ರೈಲ್ವೆ ವಿಲೀನ... ಇದಕ್ಕೆ ಕಾರಣ ಯಾರು? - 2020 ಕೇಂದ್ರ ಬಜೆಟ್
1853ರಲ್ಲಿ ಮುಂಬೈಯಿಂದ ಪ್ರಥಮ ಬಾರಿಗೆ ಅಡಿಯಿಟ್ಟ ರೈಲು 400 ಪ್ರಯಾಣಿಕರನ್ನು ಹೊತ್ತು ದಟ್ಟ ಹೊಗೆ ಉಗುಳುತ್ತ 33 ಕಿಲೋಮೀಟರ್ ದೂರದ ಥಾಣೆಯನ್ನು ತಲುಪಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಅಂದು ಮಂದಗತಿಯಲ್ಲಿ ಸಾಗಿದ್ದ ಇದೇ ಭಾರತೀಯ ರೈಲು 2019ರ ವೇಳೆಗೆ 180 ಸ್ಪೀಡ್ ವೇಗದ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ದೇಶಕ್ಕೆ ಪರಿಚಯಿಸಿತ್ತು. ಈ 168 ವರ್ಷಗಳಲ್ಲಿ ಭಾರತೀಯ ರೈಲು ಸಾಗಿ ಬಂದ ಹಾದಿಯು ಗ್ರಾಮೀಣ ಹಾಗೂ ನಗರ ಭಾರತೀಯರ ಅವಿಭಾಜ್ಯ ಅಂಗವಾಗಿದೆ. ರೈಲ್ವೆಯ ಕೊನೆಯ ಬಜೆಟ್ ಅನ್ನು ಅಂದಿನ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರು 2016ರ ಫೆಬ್ರವರಿ 25ರಂದು ಮಂಡಿಸಿದ್ದರು. 2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ಸಾಮಾನ್ಯ ಬಜೆಟ್ನೊಂದಿಗೆ ರೈಲ್ವೆಯ ಅನುದಾನವನ್ನು ಮಂಡಿಸಿದ್ದರು. ಇನ್ನು ಇದೇ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಪೂರ್ಣಪ್ರಮಾಣದ ಬಜೆಟ್ನಲ್ಲಿ ರೈಲ್ವೆಗೆ ಏನು ಅನುದಾನ ನೀಡಲಿದ್ದಾರೆ ಎಂಬುದನ್ನು ಎದುರು ನೋಡಲಾಗುತ್ತಿದೆ.