ಸಾಗರದಡಿ ದೇಶದ ಮೊದಲ ಬುಲೆಟ್ ಟ್ರೈನ್- 2 ಗಂಟೆಗಳಲ್ಲಿ ಮುಂಬೈ ಟು ಅಹಮದಾಬಾದ್ - undefined
ಭಾರತದ ಮೊಟ್ಟ- ಮೊದಲ ಸಮುದ್ರದಾಳದಲ್ಲಿ ರೈಲು ಸುರಂಗ ಮಾರ್ಗ ಯೋಜನೆಯ ಕಾಮಗಾರಿ ಶ್ರೀಘ್ರದಲ್ಲೇ ಆರಂಭವಾಗಲಿದ್ದು, ಮುಂಬೈ- ಅಹಮದಾಬಾದ್ ನಡುವಿನ 508 ಕಿ.ಮೀ. ಅಂತರವನ್ನು ಬುಲೆಟ್ ರೈಲು 350 ಕಿ. ಮೀ ಗರಿಷ್ಠ ವೇಗದಲ್ಲಿ ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದೆ. ಈ ಮಾರ್ಗದ ಪೈಕಿ ಥಾಣೆ- ವಿರಾರ್ ನಡುವೆ 21 ಕಿ.ಮೀ ಉದ್ದದ ಸುರಂಗ ಮಾರ್ಗವು ಸಮುದ್ರದ ಅಡಿಯಲ್ಲಿ ನಿರ್ಮಾಣವಾಗಲಿದೆ.