ದೀಪಾವಳಿ ಹಬ್ಬಕ್ಕೆ ರೈತರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್.. ಧಾನ್ಯಗಳ ಬೆಂಬಲ ದರದಲ್ಲಿ ₹ 325 ಹೆಚ್ಚಳ - Cabinet Committee on Economic Affairs
ಕೇಂದ್ರ ಸರ್ಕಾರವು ರೈತರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಗೋಧಿ ಮತ್ತು ದ್ವಿದಳ ಧಾನ್ಯಗಳ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ಗೆ 325 ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. 2019-20ನೇ ಕೃಷಿ ವರ್ಷದಲ್ಲಿ ಗೋಧಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ಗೆ 85 ರೂ. ಏರಿಕೆ ಮಾಡಿದೆ. ಇದರ ಜೊತೆಗೆ ದಿದ್ವಳ ಧಾನ್ಯಗಳಾದ ಗೋಧಿ, ಕಡಲೆ, ಹೆಸರು ಹಾಗೂ ಎಣ್ಣೆ ಬೀಜ ಕುಸುಬೆಯ ಬೆಂಬಲ ಬೆಲೆ ಹೆಚ್ಚಿಸಲು ಸಹಮತಿ ನೀಡಿದೆ.