ಆಭರಣ ಪ್ರಿಯರಿಗೆ ಶಾಕಿಂಗ್... ಮತ್ತೆ ಗಗನ ಮುಖಿಯಾದ ಚಿನ್ನ, ಬೆಳ್ಳಿ ದರ!: VIDEO - ಚಿನ್ನ
ಚಿನ್ನಾಭರಣಗಳೆಂದರೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಭಾರತೀಯರಿಗೆ ತುಸು ಹೆಚ್ಚೇ. ಭಾರತೀಯ ನಾರಿಯರಿಗೆ ಚಿನ್ನಾಭರಣ ಖರೀದಿ ಎಂದರೆ ಎಲ್ಲಿಲ್ಲದ ಪ್ರೀತಿ. ದೀಪವಾಳಿ ಹಬ್ಬದ ಸೀಸನ್ನಲ್ಲಿ ಚಿನ್ನದ ದರದಲ್ಲಿ ಏರಿಕೆ ಕೂಡಾ ಆಗಿದೆ. ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 220 ರೂಪಾಯಿ ಏರಿಕೆಯಾಗಿ 39,240 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ಬಂಗಾರದ ನಡೆ ಅನುಸರಿಸಿದ ಬೆಳ್ಳಿಯೂ ಪ್ರತಿ ಕೆ.ಜೆ. ಮೇಲೆ 670 ರೂಪಾಯಿ ಏರಿಕೆಯಾಗಿ 47,680 ರೂಪಾಯಿ ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.