ಮೋದಿ ಆಡಳಿತದಲ್ಲಿ 4 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ: ಪಿ ಚಿದಂಬರಂ - ಭಾರತದ ಆರ್ಥಿಕತೆ
ಭಾರತದ ಆರ್ಥಿಕತೆಯು ಐಸಿಯುನಲ್ಲಿದೆ ಎಂಬ ಪದವನ್ನು ನಾನು ಬಳಸಿಲ್ಲ. ವಾಸ್ತವವಾಗಿ, ಇದನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಆಗಿದ್ದ ಡಾ.ಅರವಿಂದ್ ಸುಬ್ರಮಣಿಯನ್ ಅವರು ತಮ್ಮ ಸಂದರ್ಶನದಲ್ಲಿ ಬಳಸಿದ್ದರು. ಸಿಎಂಐಇ ದತ್ತಾಂಶದ ಪ್ರಕಾರ, ಕೆಲವು ವರ್ಷಗಳಲ್ಲಿ 3ರಿಂದ 4 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.